Sunday 8 March 2015

                   SSLC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಗಮನಿಸಬೇಕಾದ ಕೆಲವು ಸಂಗತಿಗಳು

  • ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮೊದಲೇ ಪರೀಕ್ಷಾಹಾಲ್ ನ ಬಳಿ ಇರಿ.ಎಲ್ಲಾ ದಿನವೂ ಮಧ್ಯಾಹ್ನ 1.30 ಕ್ಕೆ ಪರೀಕ್ಷೆ ಆರಂಭವಾಗುವುದು.
  • 1.30 ಕ್ಕೆ Ans.Sheet ಸಿಕ್ಕಿದಾಗ ಮೊದಲ ಪುಟದಲ್ಲಿ ನಿಮ್ಮ ರಿಜಿಸ್ಟರ್ ನಂಬರನ್ನು ಅದಕ್ಕಿರುವ ಜಾಗದಲ್ಲಿ ತಪ್ಪಿಲ್ಲದೆ ಬರೆಯಬೇಕು,ಅಲ್ಲದೆ ಸಮಯ,ಸಬ್ಜೆಕ್ಟ್ , ತಾರೀಕು ಇತ್ಯಾದಿ ವಿಷಯಗಳನ್ನು ಪರೀಕ್ಷಾಮೇಲ್ವಿಚಾರಕರು ಹೇಳಿದಂತೆ ಬರೆಯಬೇಕು.  1.45 ಕ್ಕೆ ಪ್ರಶ್ನೆಪೇಪರ್ ಸಿಕ್ಕಿದಾಗ ಒಂದು ಮತ್ತು ಮೂರನೇ  ಪುಟದಲ್ಲಿ ಮೇಲ್ಭಾಗದಲ್ಲಿ ರಿಜಿಸ್ಟರ್ ನಂಬರನ್ನು ಬರೆಯಬೇಕು.
  • ಕೂಲ್ ಆಫ್ ಟೈಮ್ ನಲ್ಲಿ ಪ್ರಶ್ನೆಪೇಪರನ್ನು ಶ್ರದ್ಧೆಯಿಟ್ಟು ಓದಬೇಕು.
  • ಸರಿಯಾಗಿ 2 ಗಂಟೆಗೆ ಉತ್ತರ ಬರೆಯಲು ಆರಂಭಿಸಬೇಕು.
  • ಪ್ರತಿ ಅರ್ಧ ಗಂಟೆಗೊಮ್ಮೆ ಬೆಲ್ ಕೊಡಲಾಗುತ್ತದೆ.
  •  ಉತ್ತರ ಬರೆಯುವಾಗ ಸರಿಯಾದ ಪ್ರಶ್ನಾನಂಬರನ್ನು ನಮೂದಿಸಬೇಕು.
  • ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆಯಲು ಪ್ರಯತ್ನಿಸಬೇಕು.
  • ಪ್ರತೀ ದಿನ ಇನ್ ಸ್ಟ್ರುಮೆಂಟ್ ಬೋಕ್ಸ್  ತರಬೇಕು. ಅದರಲ್ಲಿ 2 ಪೆನ್, ಪೆನ್ಸಿಲ್, ರಬ್ಬರ್,ಸ್ಕೇಲ್ ಇತ್ಯಾದಿ.ಇರುವಂತೆ ನೋಡಿಕೊಳ್ಳಿ.
  • ಪ್ರತೀ ದಿನ ಹಾಲ್ ಟಿಕೆಟ್ ತರಬೇಕು.ಆದ್ದರಿಂದ ಅದನ್ನು ಇನ್ ಸ್ಟ್ರುಮೆಂಟ್ ಬೋಕ್ಸ್ ನಲ್ಲಿರಿಸಿ.  
  • Ans.Sheet ನ ಪ್ರತೀ ಪುಟದಲ್ಲಿ ಪುಟನಂಬರ್ ಹಾಕಿ. Additional sheet ನ್ನು ತೆಗೆದುಕೊಂಡಾಗ ಶೀಟ್ ನಂಬರ್ ಹಾಗು ರಿಜಿಸ್ಟರ್ ನಂಬರನ್ನು ಬರೆಯಲು ಮರೆಯಬೇಡಿ.
  • ಗಂ. 3.25/4.25 ಕ್ಕೆ ವಾರ್ನಿಂಗ್ ಬೆಲ್ ಕೊಡಲಾಗುವುದು.ಆಗ ಉತ್ತರ ಪತ್ರಿಕೆಯನ್ನು ಕಟ್ಟಿ ಮತ್ತೊಮ್ಮೆ ಎಲ್ಲಾ ಉತ್ತರಗಳನ್ನು ಪರಿಶೀಲಿಸಿಕೊಳ್ಳಿ ಮತ್ತು Ans.Sheet ನಲ್ಲಿ Additional sheet  ನ ಟೋಟಲ್ ಸಂಖ್ಯೆಯನ್ನು ಅದಕ್ಕಾಗಿ ಇರುವ ಜಾಗದಲ್ಲಿ ನಮೂದಿಸಿ.
  • ಕೊನೆಯಬೆಲ್ ಆದಾಗ ಉತ್ತರ ಪತ್ರಿಕೆಯನ್ನು  ಅಧ್ಯಾಪಕರಿಗೆ ಕೊಡಬೇಕು.



Saturday 7 February 2015








·      ಬ್ರಿಟಿಷರ ಕೈಯಿಂದ ನಮ್ಮ ದೇಶವನ್ನು ಮುಕ್ತಗೊಳಿಸಿದ ಗಾಂಧೀಜಿಯ  ಇನ್ನೊಂದು ಕನಸು ಭಾರತ ದೇಶವು ಕಸ ಮತ್ತು ಕೊಳಕಿನಿಂದ ಮುಕ್ತವಾಗಿರಬೇಕೆಂಬುದಾಗಿತ್ತು. 

ಇದನ್ನು ನೆನಸಾಗಿಸಲು ಇಲ್ಲಿಂದಲೇ ಆರಂಭಿಸುವಿರಾ?

·       "ನಾನು ಎಲ್ಲೆಂದರಲ್ಲಿ ಕಸ ಬಿಸಾಡುವುದಿಲ್ಲ.ಪೆಪ್ಸಿ, ಮಜ್ಜಿಗೆ,ಉಪ್ಪಿನಕಾಯಿ ಇತ್ಯಾದಿಗಳ.... ತೊಟ್ಟೆಗಳನ್ನು ಕ್ಲಾಸಿನಲ್ಲಿ/ವರಾಂಡದಲ್ಲಿ/ಶಾಲೆಗೆ ಬರುವ ದಾರಿಯಲ್ಲಿ ಎಸೆಯುವುದಿಲ್ಲ" ಎಂಬ ಪ್ರತಿಜ್ಞೆ ಮಾಡಿ, ಅದರಂತೆ ನಡೆಯಿರಿ.
·      ಕೊಳೆಯನ್ನು ಸ್ವಚ್ಛಗೊಳಿಸುವುದು ಒಂದು ಕೆಲಸವಾದರೆ ಕಸದ ಉತ್ಪತ್ತಿಯನ್ನು ಕಡಿಮೆ ಮಾಡುವುದೂ ಸ್ವಚ್ಛತೆಯ ಭಾಗವೇ ಆಗಿದೆ
·      ಪ್ರತಿದಿನ ಮುಂಜಾನೆಯ ಪ್ರಾರ್ಥನೆಯ/ಸ್ಟಡಿ ಬೆಲ್  ಮೊದಲು ಕ್ಲಾಸನ್ನು/ಶಾಲಾ ಮೈದಾನವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು     

 ಸಾರ್ವಜನಿಕ ಸ್ಥಳವೆಂದರೆ ’ನಮ್ಮ ಮನೆಯ ಅಂಗಳ’ ಎಂಬ ಭಾವನೆ ನಮ್ಮ ವಿದ್ಯಾರ್ಥಿಗಳಲ್ಲಿ ಬರಬೇಕು.
ಅಂಗಡಿ ಬುಡದಲ್ಲಿ,ರಸ್ತೆಯಲ್ಲಿ ಚಾಕಲೇಟ್/ಲೇಸ್ ಇತ್ಯಾದಿ ತಿಂದು ಅದರ ಕವಚಗಳನ್ನು ಅಲ್ಲೇ ಎಸೆದು ಬಿಡುವ ಬದಲು ಅದನ್ನು ಕಸದಬುಟ್ಟಿಯಲ್ಲಿ ಹಾಕಬೇಕು.
ಶೌಚಾಲಯಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.
ರಸ್ತೆಯಲ್ಲಿ, ಶಾಲಾ ವರಾಂಡದಲ್ಲಿ, ಜನ ಓಡಾಡುವ ಜಾಗದಲ್ಲಿ ಉಗುಳುವುದು ನಾವು ಇತರರಿಗೆ ತೋರುವ ಅಗೌರವ.

Sunday 1 February 2015



                          SSLC Model Examination, February 2015
                                               Time Table
Date
Subject
Time
10.02.15 Tuesday
Language Paper I
10AM-11.45 AM
10.02.15 Tuesday
Language Paper II
1.45PM- 3.30PM
11.02.15 Wednesday
English
10AM-12.45PM
11.02.15 Wednesday
Hindi
1.45PM- 3.30PM
12.02.15 Thursday
Social Science
10AM-12.45PM
12.02.15 Thursday
Physics
1.45PM- 3.30PM
13.12.15 Friday
Chemistry
10AM-11.45PM
13.12.15 Friday
Biology
1.45PM- 3.30PM
16.12.15 Monday
Mathematics
9.30AM-12.15PM

Tuesday 27 January 2015


ಎಸ್.ಎಸ್.ಎಲ್.ಸಿ
ಪ್ರಾಥಮಿಕ ಶಿಕ್ಷಣದ ಕೊನೆಯ ಹಂತ.ಇದರಲ್ಲಿ ಉತ್ತಮ ಸಾಧನೆ ಅತ್ಯವಶ್ಯ ಎಂದು ಹೆಚ್ಚಿನೆಲ್ಲಾ ವಿದ್ಯಾರ್ಥಿಗಳ ಪೋಷಕರ ಅನಿಸಿಕೆ. ಹತ್ತನೇ ತರಗತಿ ನಂತರ ಏನು ಓದಬೇಕು ಅಥವಾ ಮುಂದೇನು ಮಾಡಬೇಕು ಎಂಬ ಚಿಂತನೆಗೆ ನಮ್ಮನ್ನು ಹಚ್ಚುವುದರಿಂದ, ಇದು ನಮ್ಮ ಬಾಳಿನ ಪ್ರಮುಖ ಘಟ್ಟಗಳಲ್ಲಿ ಇದೂ ಒಂದು.
ಎಸ್.ಎಸ್.ಎಲ್.ಸಿಯಿಂದ ಏನು ಪ್ರಯೋಜನ?
  1. ನಮ್ಮ ಬಯೋಡೇಟಾ, ವಯಸ್ಸಿನ ದಾಖಲೆ. (ಪರೀಕ್ಷೆಯಲ್ಲಿ ನಪಾಸಾದರೂ ಸರ್ಟಿಫಿಕೇಟ್ ಸಿಗುತ್ತದೆ.)
  2. ಮುಂದಿನ ಓದಿಗೆ ಕಾಲೇಜಿನಲ್ಲಿ ಪ್ರವೇಶಾವಕಾಶ.
  3. ಭವಿಷ್ಯದ ಓದಿಗೆ ಸ್ಕಾಲರ್ ಷಿಪ್ ನೆರವು (ಉತ್ತಮ ಗ್ರೇಡ್ /ಅಂಕ ಗಳಿಸಿದರೆ)
  4. ಉದ್ಯೋಗಕ್ಕೆ.   ..........

     
    ಯಶಸ್ವಿ ವಿದ್ಯಾರ್ಥಿಯಾಗುವುದು ಹೇಗೆ?

    1. ಅಧ್ಯಾಪಕರ ಮಾತುಗಳನ್ನು ಗಮನವಿಟ್ಟು ಆಲಿಸುವುದು : ವಿಷಯಗಳನ್ನು ತಿಳಿದುಗೊಳ್ಳಲು ಹಾಗೂ ನೀವು ಯಾವುದನ್ನು ಮುಖ್ಯವಾಗಿ ಕಲಿಯಬೇಕೆಂಬುದು ಅಧ್ಯಾಪಕರ ಅಭಿಪ್ರಾಯವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು, ನೀವು ಅವರ ಮಾತುಗಳಿಗೆ ಗಮನ ಕೊಡುವುದು ಮುಖ್ಯ.ಕ್ಲಾಸಿಗೆ ಬರುವ ಮುನ್ನ ಪಠ್ಯ ಪುಸ್ತಕವನ್ನು ಓದಿದರೆ ತರಗತಿಯಲ್ಲಿ ನೀಡುವ ವಿವರಣೆ ಹೆಚ್ಚು ಮನದಟ್ಟಾಗುವುದು.
    2. ತರಗತಿಯಲ್ಲಿ ನೋಟ್ಸ್ ಬರೆದುಕೊಳ್ಳುವುದು: ಅಧ್ಯಾಪಕರು ವಿವರಿಸುವ ವಿಷಯಗಳ ಮುಖ್ಯ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುವುದು.
    3. ಪಠ್ಯಪುಸ್ತಕಗಳನ್ನು ಓದುವುದು: ತರಗತಿಯಲ್ಲಿ ಆಲಿಸಿದ ವಿಷಯಗಳು ಮನಸ್ಸಿನಲ್ಲಿ ಬೇರೂರಿ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗುವುದು.
    4. ಪಠ್ಯಪುಸ್ತಕದ ಅಭ್ಯಾಸಗಳನ್ನು ಪೂರ್ತಿ ಮಾಡುವುದು.ತರಗತಿ ಕಲಿಕೆಯಲ್ಲಿ ಪ್ರೌಢಿಮೆ ಹೊಂದಲು ಇದು ಪೂರಕ.
    5. ಕಲಿಕಾ ಗುಂಪಿನ ರಚನೆ : 3 ರಿಂದ 6 ಮಕ್ಕಳ ತಂಡ ರಚಿಸಿ ಒಟ್ಟಿಗೆ ಸೇರಿಕೊಂಡು ಪಾಠದ ವಿಷಯಗಳನ್ನು ವಿಮರ್ಶಿಸಿಕೊಂಡು ಪರೀಕ್ಷೆಗೆ ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದು.
      ವಿದ್ಯಾರ್ಥಿಗಳು ಸೋಲುವುದಕ್ಕೆ ಕೆಲವು ಕಾರಣಗಳು
      1. ಸಮಯಕ್ಕೆ ಸರಿಯಾಗಿ ಶಾಲೆಗೆ / ಕ್ಲಾಸಿಗೆ ತಲುಪದಿರುವುದು.
      2. ಟೈಮ್ ಟೇಬಲ್ ಗನುಸಾರವಾಗಿ ಪುಸ್ತಕಗಳನ್ನು ತರದಿರುವುದು.
      3. ಟೈಮ್ ಟೇಬಲ್ ಗನುಸಾರವಾಗಿ ನೋಟ್ ಬುಕ್ ತರದಿರುವುದು.
      4. ನೋಟ್ ಪುಸ್ತಕ ಸರಿಯಾಗಿ ಇಟ್ಟುಕೊಳ್ಳದಿರುವುದು.
      5. ಕ್ಲಾಸಿನಲ್ಲಿ ಅಧ್ಯಾಪಕರ ಮಾತುಗಳನ್ನು ಗಮನವಿಟ್ಟು ಆಲಿಸದಿರುವುದು.
      6. ಪಾಠದ ಸಂದರ್ಭದಲ್ಲಿ ಬೇರೆ ಕೆಲಸ ಮಾಡುತ್ತಿರುವುದು.
      7. ಅಗತ್ಯದ ವೇಗದಲ್ಲಿ ನೋಟ್ಸ್ ಬರೆಯದಿರುವುದು.
      8. ಹೋಂವರ್ಕ್ ಮಾಡದಿರುವುದು.
      9. ಶಾಲೆಗೆ ಆಗಾಗ ಬರದಿರುವುದು.
      10. ಶಾಲೆಗೆ ಬಾರದ ದಿನದ ಪಾಠದ ಬಗ್ಗೆ ಅರಿತುಕೊಳ್ಳದಿರುವುದು ಮತ್ತು ನೋಟ್ಸ್ ಬರೆಯದಿರುವುದು
      11. ಪ್ರತಿದಿನ ಅಭ್ಯಾಸಕ್ಕೆ ಅಗತ್ಯವಾದಷ್ಟು ಸಮಯ ವಿನಿಯೋಗಿಸದಿರುವುದು.
      12. ಅಭ್ಯಾಸಕ್ಕೆ ಸರಿಯಾದ ಟೈಮ್ ಮ್ಯಾನೇಜ್ ಮೆಂಟ್ ಇಲ್ಲದಿರುವುದು.
      13. ಓದುವುದನ್ನು ಪ್ರತಿದಿನ ನಾಳೆಗೆ ಎಂದು ಮುಂದೂಡುವುದು.
      14. ಪಾಠ ಓದಬೇಕಾದ ಸಮಯದಲ್ಲಿ ಆಡುವುದು.
      15. ರೇಡಿಯೋ / MP3 ಹಾಡು ಕೇಳುತ್ತಾ ಅಥವಾ T.V/ computer ನೋಡುತ್ತಾ ಅಭ್ಯಾಸ ಮಾಡುತ್ತಿರುವುದು.
      16. ಉತ್ತಮ ಗೆಳೆಯರನ್ನು ಹೊಂದದಿರುವುದು.
      17. ಕೆಟ್ಟವರ ಸಹವಾಸದಿಂದ ಮನಸ್ಸು ಕೆಟ್ಟು ಅಧ್ಯಾಪಕರನ್ನು ಧಿಕ್ಕರಿಸುವುದು.
      18. ಸಹಪಾಠಿಗಳಲ್ಲಿ ಉತ್ತಮ ಗುಣವನ್ನು ಕಾಣದಿರುವುದು.
      19. ಹೊಂದಾಣಿಕೆ ಇಲ್ಲದಿರುವುದು.
      20. ಶಾಲೆಯ ಪಾಠಪ್ರವಚನ ಬಗ್ಗೆ ಹೆತ್ತವರಿಗೆ ಮಾಹಿತಿಯನ್ನು ಕೊಡದಿರುವುದು.
      21. ಅಧ್ಯಾಪಕರ ಮತ್ತು ಅವರು ಮಾಡುವ ಪಾಠದ ಬಗ್ಗೆ ದೋಷವನ್ನೇ ಕಾಣುವುದು.
      22. ಹಲವು ಸಲ ಓದಿದರೂ ಅರ್ಥವಾಗದಿರುವುದು. ಅಧ್ಯಾಪಕರಲ್ಲಿ ಕೇಳಿ ಅರ್ಥೈಸಿಕೊಳ್ಳುವುದಕ್ಕೂ ಪ್ರಯತ್ನಿಸದಿರುವುದು.
      23. ಅಂದವಿಲ್ಲದ(ಕೊಳಕಾದ) ಅಕ್ಷರದಿಂದ, ಬರೆದುದನ್ನು ಓದಲಾಗದೆ ಪರೀಕ್ಷೆಯಲ್ಲಿ ಮಾರ್ಕ್ ಕಳೆದುಕೊಳ್ಳುವುದು.
      24. ಅಂದವಿಲ್ಲದ ಚಿತ್ರಗಳನ್ನು ಬಿಡಿಸುವುದು.
      25. ಕಲಿಕಾ ಗುಂಪಿನಲ್ಲಿ ಭಾಗವಹಿಸದಿರುವುದು.
      26. ಹಿಂದಿನ ಕ್ಲಾಸಿನ ಪಾಠಗಳು ಏನೇನೂ ನೆನಪಿನಲ್ಲಿರದೆ ಇರುವುದು.
      27. ಬೋರ್ಡಿನಲ್ಲಿ ಬರೆದುದನ್ನು ಗಮನಿಸದಿರುವುದು.(ಲೆಕ್ಕದ ಸ್ಟೆಪ್ಸ್, ರಾಸಾಯನಿಕ ಸೂತ್ರ......)
      28. ಅರ್ಥೈಸದೆ ನಕಲು ಮಾತ್ರ ಮಾಡುವುದು.
      29. ಸ್ವಂತ ಆತ್ಮವಿಶ್ವಾಸ ಇಲ್ಲದಿರುವುದು.
      30. ಸರಿಯಾಗಿ ರಿವಿಜನ್ ಮಾಡದಿರುವುದು.
      31. ಓದಿದ ಪಾಠಗಳನ್ನು ಮತ್ತೆ ಮತ್ತೆ ಓದದೆ ಇರುವುದು.
      32. ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಸರಿಯಾಗಿ ಓದದೆ, ಮನದಟ್ಟು ಮಾಡಿಕೊಳ್ಳದೆ ಉತ್ತರ ಬರೆಯುವುದು.
      33. ವ್ಯಕ್ತಿತ್ವ ವಿಕಸನಕ್ಕೆ ಸಂಬ0ಧಿಸಿದ ಪುಸ್ತಕಗಳನ್ನು ಓದದೆ ಇರುವುದು.




Friday 26 December 2014

Thursday 25 December 2014

Friday 19 September 2014